Tuesday, August 16, 2011

ಅಣ್ಣಾ ಬೆಂಬಲಕ್ಕೆ ಬಂದವರು ಮೈಕಿಗಾಗಿ ಕಿತ್ತಾಡಿದರು

ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಮರ ಸಾರಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಣ್ಣಾ ಹಜಾರೆಯನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಗಳೂರಲ್ಲಿ ಅಣ್ಣಾ ಅವರಿಗೆ ಬೆಂಬಲ ಸೂಚಿಸಲು ಮುಂದಾದ ಎರಡು ಬಣಗಳು ಮೈಕಿಗಾಗಿ ಕಿತ್ತಾಡಿದ ಮಾಡಿದ ವಿಲಕ್ಷಣ ಘಟನೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದಿದೆ.ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು.ಸೋಜಿಗದ ವಿಷಯ ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳಲ್ಲೂ ತವಕ. ಆದರೆ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕೊಟ್ಟರೆ ಸಾಕು ಎನ್ನುವುದು ಒಂದು ಗುಂಪಿನ ವಾದ. ಆದರೆ ಮತ್ತೊಂದು ಗುಂಪು ಲೋಕಪಾಲ ಮಸೂದೆ ಬಗ್ಗೆ ಬೇರೆಯೇ ಸಂಗತಿಗಳಿವೆ, ಅವುಗಳನ್ನು ಬಹಿರಂಗಪಡಿಸಲು ಅವಕಾಶ ಕೊಡಬೇಕು ಎನ್ನುವ ಪಟ್ಟು.ಅಂತಿಮವಾಗಿ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಎರಡೂ ಬಣಗಳ ಮೈಕಿಗಾಗಿ ಗುದ್ದಾಡಲು ಮುಂದಾದುದದನ್ನು ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು. ಅಂತೂ ಅಣ್ಣಾ ಅವರಿಗೆ ಎರಡೂ ಗುಂಪುಗಳ ಬೆಂಬಲ ಸಿಕ್ಕಿತು.
ಬಲ್ಲ ಮೂಲಗಳ ಮಾಹಿತಿ ಆಧಾರದಲ್ಲಿ ಹೇಳುವುದಾದರೆ ಇಲ್ಲಿ ಸೇರಿದವರಲ್ಲಿ ಶೇಕಡ 50ರಷ್ಟು ಭ್ರಷ್ಟರು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದರು,ಕೆಲವರು ಭೂಗಾತ ಪಾತಕಿಗಳು ಮತ್ತು ವಿವಿಧ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳಿರುವವರು ಇದ್ದರು.ಇವರು ಭ್ರಷ್ಟಾಚಾರದ ಬಗ್ಗೆಮಾತನಾಡುವುದು ಬಿಡಿ ಬೆಂಬಲ ನೀಡಲು ನಾಲಯಕ್ಕು..ನೇರ ನಡೆ ನುಡಿಯ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಮಾತ್ರ ಪ್ರತಿಭಟನೆಯಲ್ಲಿ ತಲೆಗೆ ಗಾಂಧಿ ಟೋಪಿ ಇಟ್ಟ( ಇತರರಿಗೆ ಟೋಪಿ ಇಡುವ) ಮಂದಿಯನ್ನು ಚೆನ್ನಾಗಿ ತರಾಟೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.ಗಾಂಧಿ ಟೋಪಿ ಇಟ್ಟು ಗಾಂಧಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಫೋಸು ಕೊಟ್ಟರೆ ಭ್ರಷ್ಟಾಚಾರ ಕಡಿಮೆ ಆಗಲ್ಲ ಮತ್ತು ಈ ಭ್ರಷ್ಟರಿಗೆ ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ನೈತಿಕತೆ ಕೂಡ ಇಲ್ಲ ಎಂದು ಚೆನ್ನಾಗಿ ತದಕಿದ್ದಾರಂತೆ.ಇಷ್ಟು ಸಾಕಾ ಅಲ್ಲಾ ಇನ್ನೂ ಬೇಕಾ ಈ ಭ್ರಷ್ಟರಿಗೆ...

No comments:

Post a Comment