Saturday, February 25, 2012

ಚಾನೆಲ್ಲಿಗಳ ಹಲ್ಕತನ, ಇದು ಇವರಿಗೆ ಶೋಭೆನಾ ?


ಒಟ್ಟು ಹನ್ನೆರಡು ನಿಮಿಷಗಳ ಟೇಪು ನಮ್ಮ ಬಳಿ ಇದೆ ಎಂದು ಚಾನಲ್ಗಳು ಹೇಳಿಕೊಳ್ಳುತ್ತಿವೆ. ಅದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಚಾನಲ್ ಗಳಲ್ಲಿ ಪ್ರಸಾರವಾಗಿದ್ದು ಎಷ್ಟು ಗಂಟೆಗಳ ಕಾಲ? ಐಬಿಎನ್ ನಂಥ ಚಾನಲ್ ಗಳು ಮೊಬೈಲ್ ಪರದೆಯನ್ನು ಪೂರ್ತಿ ಮಸುಕು ಮಾಡಿ ಪ್ರಸಾರ ಮಾಡಿದವು. ಕನ್ನಡದ ಕೆಲ ಚಾನಲ್ಗಳು ಅರೆಬರೆ ಮಸುಕು ಮಾಡಿ ಗಂಟೆಗಟ್ಟಲೆ ಪ್ರಸಾರ ಮಾಡಿದವು. ಆರಂಭದಲ್ಲಂತೂ ಕೆಲ ಚಾನಲ್ ಳು ಒಂಚೂರೂ ಮುಸುಕು ಮಾಡದೇ, ನೀಲಿಚಿತ್ರಗಳನ್ನು ಯಥಾವತ್ತಾಗಿ ಪ್ರಸಾರವನ್ನೇ ಮಾಡಿಬಿಟ್ಟವು.

ಮುಠ್ಠಾಳ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ನೋಡಿದ. ಅದನ್ನು ಇನ್ನೊಬ್ಬ ಮಂತ್ರಿ ಇಣುಕಿದ. ತನ್ನ ಮೊಬೈಲನ್ನು ಕೊಟ್ಟು ಈ ಚಿತ್ರಗಳನ್ನು ನೋಡಿ ಎಂದವನು ಮತ್ತೊಬ್ಬ ಮಂತ್ರಿ. ಈ ನೀಚ ಕೆಲಸಕ್ಕೆ ಆ ಮೂವರೂ ಮಂತ್ರಿಪದವಿ ಕಳೆದುಕೊಂಡಿದ್ದಾರೆ. ಟಿವಿ ಚಾನಲ್ಗಳು ಸಾಹಸಕ್ಕೆ ಶಹಬ್ಬಾಸ್ ಅನ್ನೋಣ.

ಆದರೆ ಇದೇ ಚಾನಲ್ ಗಳು ಇದೇ ಬ್ಲೂಫಿಲ್ಮ್ ನ ತುಣುಕುಗಳನ್ನು ಕೋಟ್ಯಂತರ ಜನರು ನೋಡುವಂತೆ ಮಾಡಿದರಲ್ಲ? ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನು ತೋರಿಸಿದರಲ್ಲ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು? ಸಚಿವತ್ರಯರ ನೀಲಿಚಿತ್ರ ವೀಕ್ಷಣೆಯನ್ನು ಹಲವು ಹಾಡುಗಳನ್ನು ಬಳಸಿ ತಮಾಶೆಯಾಗಿ ತೋರಿಸುವ ಪ್ರಯತ್ನವನ್ನೂ ಚಾನಲ್ಗಳು ಮಾಡಿದವು. ಜತೆಗೆ ಅಯ್ಯೋ ಅಮ್ಮಾ ಎನ್ನುವ ಹೆಣ್ಣು ಕಂಠದ ಕಾಮೋದ್ವೇಗದ ಆರ್ತನಾದವೂ ಕೇಳಿಬಂತು. ಮನೆಮಕ್ಕಳು, ಹೆಂಗಸರು, ಹಿರಿಯರು ಇದನ್ನು ನೋಡಲು ಸಾಧ್ಯವೇ ಎಂಬ ಕನಿಷ್ಠ ಸಾಮಾನ್ಯಪ್ರಜ್ಞೆಯನ್ನೂ ಚಾನಲ್ಗಳು ಮರೆತವು. ಅವರಿಗೆ ತತ್ ಕ್ಷಣದ ಟಿಆರ್ ಪಿ ಬೇಕಿತ್ತು. ಇತರ ಚಾನಲ್ ಗಳನ್ನು ಹಿಂದಿಕ್ಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ ಒಂದಕ್ಕೊಂದು ಸ್ಪರ್ಧೆ ನಡೆಸುತ್ತಾ, ಲಕ್ಷಾಂತರ ಜನರಿಗೆ ನೀಲಿ ಚಿತ್ರಗಳನ್ನು ತೋರಿಸಿಯೇಬಿಟ್ಟವು, ಗಂಟೆಗಟ್ಟಲೆ, ದಿನಗಟ್ಟಲೆ...

ಇಷ್ಟೆಲ್ಲ ಮಾಡುವ ಚಾನಲ್ ಗಳ ನಿರೂಪಕರು ಸಚಿವತ್ರಯರನ್ನು ಪೋಲಿಗಳು, ಕಾಮಾಂಧರು, ದರ್ಟಿ ಪಾಲಿಟಿಷಿಯನ್ಸ್ ಎಂದೆಲ್ಲಾ ನೇರಾನೇರ ಬೈಯುತ್ತಲೇ ಇದ್ದರು. ಜನರ ಆಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಅವಕಾಶವನ್ನೂ ಯಾವ ನಿರೂಪಕನೂ ಬಿಡಲಿಲ್ಲ. ಆದರೆ ಅದೇ ಸಮಯಕ್ಕೆ ಸಚಿವತ್ರಯರು ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಪ್ರಮಾದವನ್ನು ತಾವೇ ಮಡುತ್ತಿದ್ದೇವೆಂಬುದನ್ನು ಅವರು ಮರೆತರು.

ಎಷ್ಟು ವಿಚಿತ್ರವೆಂದರೆ ಪ್ರತಿ ನ್ಯೂಸ್ ಚಾನಲ್ಗಳೂ ಸಚಿವರ ಬ್ಲೂಫಿಲ್ಮ್ ವೀಕ್ಷಣೆಯ ಸುದ್ದಿಯನ್ನು ಬ್ರೆಕ್ ಮಾಡಿದ್ದು ತಾವೇ ಮೊದಲು ಎಂದು ಹೇಳಿಕೊಂಡವು. ಕೆಲ ಚಾನಲ್ಗಳಂತೂ ತಮ್ಮ ಕ್ಯಾಮರಾಮೆನ್ಗಳ ಸಂದರ್ಶನವನ್ನೂ ಪ್ರಸಾರ ಮಾಡಿದವು. ಒಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದ ಸುದ್ದಿಯನ್ನು ಬಿತ್ತರಿಸುವ ಧಾವಂತಕ್ಕಿಂತ, ಈ ಸುದ್ದಿ ಹಿಡಿದುತಂದಿದ್ದು ನಾವೇ ಎಂಬ ಅಹಂ ಮತ್ತು ಅದರಿಂದ ಬರುವ ಲಾಭವೇ ಚಾನಲ್ ಗಳಿಗೆ ಮುಖ್ಯವಾದಂತೆ ಕಂಡುಬಂತು.

ವಿಧಾನಸೌಧದಲ್ಲಿ ಕಲಾಪ ನಡೆಯುವಾಗಲೇ ಸಚಿವರುಗಳು ಬ್ಲೂಫಿಲ್ಮ್ ನೋಡಿದರು. ನೈತಿಕ ದೃಷ್ಟಿಯಿಂದ, ಕಾನೂನಿನ ದೃಷ್ಟಿಯಿಂದ ಇದು ಅಪರಾಧ. ಅದನ್ನು ಬಯಲು ಮಾಡಿದ್ದೂ ಕೂಡ ಶ್ಲಾಘನೀಯವೇ ಹೌದು. ಆದರೆ ಅದನ್ನು ಹೇಳುವ ಭರದಲ್ಲಿ ಚಾನಲ್ಗಳು ಹದ್ದುಮೀರಿ ಯಥಾವತ್ ದೃಶ್ಯಗಳನ್ನು ಪ್ರಸಾರ ಮಾಡಿದವು. ಅದು ಅನಿವಾರ್ಯವೇನೂ ಆಗಿರಲಿಲ್ಲ. ಅದಕ್ಕೆ ಹೊರತಾದ ಮಾರ್ಗವೂ ಇತ್ತು. ಚಾನಲ್ ಗಳ ಮುಖ್ಯಸ್ಥರ ಜಾಗದಲ್ಲಿ ಕುಳಿತವರು ಆತ್ಮವಂಚಕರಾದಾಗ ಹೀಗೆಲ್ಲಾ ಆಗಿಬಿಡುತ್ತದೆ.

ಇಷ್ಟೆಲ್ಲ ಮಾಡಿದ ಚಾನಲ್ ಗಳು ಸ್ವತಃ ಲಕ್ಷ್ಣಣ ಸವದಿಯೇ ಪ್ರತಿಕ್ರಿಯೆ ನೀಡುತ್ತಿದ್ದಾಗ ಆತನನ್ನು ಸರಿಯಾದ ದಾರಿಯಲ್ಲಿ ಪ್ರಶ್ನಿಸಲು ವಿಫಲವಾದವು. ಲಕ್ಷ್ಮಣ ಸವದಿಯ ಪ್ರಕಾರ ಆತ ನೋಡಿದ್ದು ಬೇರೊಂದು ದೇಶದಲ್ಲಿ ನಡೆದ ನೈಜ ಘಟನೆಯೊಂದರ ವಿಡಿಯೋ. ಒಬ್ಬ ಹುಡುಗಿಯನ್ನು ನಾಲ್ವರು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲುತ್ತಾರೆ, ಆಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾರೆ. ಪೊಲೀಸರು ನಾಲ್ವರನ್ನು ಬಂಧಿಸಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ಇದು ಸವದಿ ನೋಡಿದ ವಿಡಿಯೋವಂತೆ.

ನೀಲಿಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ, ಅತ್ಯಾಚಾರ ಪ್ರಕರಣ ಹಾಗಲ್ಲ. ನೀಲಿ ಚಿತ್ರಗಳನ್ನು ನೋಡುವವರಿಗೂ ಅತ್ಯಾಚಾರ ದೃಶ್ಯಗಳನ್ನು ನೋಡುವ ಮನಸ್ಸಾಗುವ ಸಾಧ್ಯತೆ ಕಡಿಮೆ. ಈ ರೀತಿಯ ಸಾಮೂಹಿಕ ಅತ್ಯಾಚಾರ ದೃಶ್ಯವನ್ನು ನೋಡುವವರು ವಿಕೃತರೂ, ಕ್ರೂರ ಮನಸ್ಸಿನವರೂ ಸ್ಯಾಡಿಸ್ಟ್ ಗಳೂ ಆಗಿರಬೇಕು. ನೀವು ನೀಲಿ ಚಿತ್ರಗಳನ್ನು ನೋಡುವುದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೀರಿ ಎಂದು ಚಾನಲ್ ನಿರೂಪಕರು ಕೇಳಬಹುದಿತ್ತು, ಕೇಳಲಿಲ್ಲ.

ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಬಾಲಿವುಡ್ ನ ಹಸಿಹಸಿ ಸೆಕ್ಸ್ ದೃಶ್ಯಗಳಿರುವ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೀಡುತ್ತ ಬಂದಿವೆ. ನೀಲಿ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಇರುವ ಹಲವು ಸಿನಿಮಾಗಳ ದೃಶ್ಯಗಳನ್ನು ಒಂದೆಡೆ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಕೊಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಸಚಿವರುಗಳ ಸೆಕ್ಸ್ ದೃಶ್ಯ ವೀಕ್ಷಣೆಯನ್ನು ಖಂಡಿಸುವ ಜತೆಜತೆಗೆ ತಾವೇನು ಮಾಡುತ್ತಿದ್ದೇವೆಂಬುದನ್ನೂ ಈ ಚಾನಲ್ಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಸಚಿವತ್ರಯರು ಕರ್ನಾಟಕದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ನಮ್ಮ ಚಾನಲ್ ಗಳು ಕರ್ನಾಟಕದ ಮನಸ್ಸುಗಳನ್ನೇ ಕೆಡಿಸುವ ಕೆಲಸ ಮಾಡಿದವು. ಯಾರ ಅಂಕೆಗೂ ಸಿಗದ ಚಾನಲ್ಗಳು ಇನ್ನೇನೇನು ಅನಾಹುತಗಳನ್ನು ಮಾಡುತ್ತವೆಯೋ ಕಾದು ನೋಡಬೇಕು.

Saturday, December 31, 2011

ಮಾಧ್ಯಮ ಅಕಾಡೆಮಿಯಿಂದ ಗೇಟ್ ಪಾಸ್ !

ಮಾಧ್ಯಮ ಅಕಾಡೆಮಿಯಿಂದ ಪೊನ್ನಪ್ಪ ಹಾಗೂ ಇತರ ಪದಾಧಿಕಾರಿಗಳಿಗೆ ಸರಕಾರ ಒಂದೇ ವಾರದಲ್ಲಿ ಗೇಟ್ ಪಾಸ್ ನೀಡಿದೆ!
ಅಕಾಡೆಮಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ 'ಜಗದೀಶ್'ನ ಮಹಾತ್ಮೆ ಅರಿತ ಸರಕಾರ ತನ್ನ ತಪ್ಪಿನ ಅರಿವಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಹತ್ವವಾದ ನಿರ್ಣಯ ಮಾಡಿದೆ.
ಹೀಗಾಗಿ ಪೊನ್ನಪ್ಪ ಎಷ್ಟು ಧಾವಂತದಲ್ಲಿ ಅಧಿಕಾರ ಸ್ವೀಕರಿಸಿದರೋ ಅದೇ ಸ್ಪೀಡಿನಲ್ಲಿ ರಿವರ್ಸ್ ಗೆರ್ನಲ್ಲಿ ಪ್ರೆಸ್ ಕ್ಲಬ್ ಹೋಗಿ, ಎಂಜಿ ರೋಡ್ ಕಡೆ ಹೋಗಿದ್ದಾರೆ. ಪೊನ್ನಪ್ಪ ಅಧಕ್ಷಗಿರಿ ಹೋಗಲು ಮುಖ್ಯವಾಗಿ ಎರಡು ಕಾರಣವೆಂದು ಮೂಲಗಳು ತಿಳಿಸಿವೆ.
ಪೊನ್ನಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರು ಆಗಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಒಬ್ಬರಿಗೆ ಎರಡು ಹುದ್ದೆ ಬೇಡ ಎಂದು ನಿರ್ಧರಿಸಿದರಂತೆ. ಮತ್ತೊಂದೆಡೆ ಪೊನ್ನಪ್ಪ ಅವರನ್ನು ಕುರ್ಚಿಲಿ ಕೂರಿಸಲು ಆರ್.ಪಿ.ಜಗದೀಶ್ ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ. ಇದರಿಂದೆ ಮುಂದೆ ತಮ್ಮ ಮೇಲೆ ಮಾಧ್ಯಮ ಮಿತ್ರರು ಮುನಿಸಿಕೊಂಡಾರು ಎಂಬ ಜಾಣತನವನ್ನು ಸದಾನಂದ ಗೌಡರು ತೋರಿಸಿದ್ದಾರೆ. ಇದರಿಂದ ಅಕಾಡೆಮಿಯಿಂದ ಪೋ ಎಂದು ಸಂದೇಶ ನೀಡಲಾಗಿದೆ.
ಪದಾಧಿಕಾರಿಗಳ ನೇಮಕವನ್ನು ರದ್ದು ಮಾಡಲು ಕಾರಣ ಸದಸ್ಯರ ಆಯ್ಕೆಯಲ್ಲಿನ ಗೊಂದಲ ಎಂದು ತಿಳಿದುಬಂದಿದೆ. ಹಿರಿಯ ವರದಿಗಾರ ಶೃಂಗೇಶ್ ಅವರಿಗೆ ನಕ್ಸಲೈಟ್ ಜೊತೆ ಸಂಬಂಧ ಇದೆ ಎನ್ನುವುದೇ ಹಿನ್ನಡೆ ಆಗಿದೆ. ಇನ್ನು ಗಂಗಾಧರ್ ಮೂದಲಿಯಾರ್ ಮತ್ತೊಮ್ಮೆ ಸದಸ್ಯರಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಶಿವರಾಜ್ ತಂಗಡುರ್ ಅಕ್ರಡಿಶನ್ ಸಮಿತಿಯ ಸದಸ್ಯರಾಗಿದ್ದು ಮತ್ತೆ ಅಕಾಡೆಮಿ ಪದಾಧಿಕಾರಿಯಾಗಿದ್ದು ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ಅದ್ಯಕೋ ಗೊತ್ತಿಲ್ಲಿ ಈ ಹೆಸರಿನವರೆಲ್ಲ ದುರುಳರೇ ಆಗಿದ್ದರೆ.ಮೇಲಿನ 'ಜಗದ ಈಶ'ತನ್ನ ಎಡಪಂತೀಯ ಧೊರಣೆಗಳನ್ನು ಬಿಟ್ಟು ಸಿಎಂ ಹಿಂದೆ ಸುತ್ತುತ್ತಿದ್ದರೆ,ಇನ್ನೊಬ್ಬ ಹೈದ್ರಾಬಾದಿನ ' ಜಗದ ಈಶ'ಈ ಟಿವಿಯ ಕೆಲಸ ಬಿಟ್ಟು ಶೋಭಾಕ್ಕನ ಹಿಂದೆ,ಮುಂದೆ ಬೀದಿನಾಯಿತರ ಅಲೆಯುತ್ತಿದ್ದಾನೆ ಏಂದರೆ ಇವರು ಎಂಜಲಿಗೇ ಏನೂ ಮಾಡಿಯಾರು, ನೀವು ಮಾತ್ರ ಹುಷಾರು..ಸಾರ್.!.
ಇವೆಲ್ಲ ಕಾರಣಗಳಿಂದ ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸರಕಾರ ನಿಶ್ಚಯಿಸಿದೆ.

Thursday, November 3, 2011

ಪ್ರಶಸ್ತಿಗೆ ಇವರು ಅರ್ಹರೇ !?

ಮೊನ್ನೆ ತಾನೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಳನ್ನು ಮು.ಮಂತ್ರಿಗಳು ಪ್ರಕಟಿಸಿ ನವೆಂಬರ್ 1 ರಂದು ಪ್ರದಾನ ಕೂಡ ಮಾಡಲಾಯಿತು.ಕಳೆದ ಸಾಲಿನ ಅಥವಾ ಅದರ ಹಿಂದಿನ ವರ್ಷಗಳಂತೆ ಹನುಮಂತನ ಬಾಲದಂತೆ ಉದ್ದೂದ್ದದ ಪ್ರಶಸ್ತಿ ಅಪೇಕ್ಷಿತರ ಪಟ್ಟಿ ಈ ಬಾರಿ ಇರಲಿಲ್ಲ ಎಂಬುದು ಸಂತೋಷದ ವಿಷಯ ಮತ್ತು ಮು.ಮಂತ್ರಿಗಳು ಕೊನೆಯ ಕ್ಷಣದವರೆಗೂ ತಾವೂ ನೀಡಿದ ಈ ಬಾರಿ ಪ್ರಶಸ್ತಿಗಳು 50 ರ ಗಡಿ ದಾಟಲ್ಲವೆಂಬೂದನ್ನು ಮಾತನ್ನು ಏನೇ ಒತ್ತಡಗಳು ಬಂದರೂ ಉಳಿಸಿದ್ದರು. ರಿಯಲೀ ದಿಸ್ ಈಸ್ ಎ ಗ್ರೇಟ್ ತಿಂಗ್. But ಪ್ರಶ್ನೆ ಇರೋದು ಈ 50 ರಲ್ಲಿ ಎಷ್ಟು ಮಂದಿ ಇದಕ್ಕೆ ಅರ್ಹರಾಗಿದ್ದರೂ ಎಂಬುದು. ಇದರಲ್ಲಿ ಪತ್ರಕರ್ತರಿಗೆ ನೀಡಿದ ಪ್ರಶಸ್ತಿಗಳಲ್ಲಿ ಕಪ್ರದ ಪ್ರತಾಪ್ ಸಿಂಹ ಮತ್ತು ಈ ಟಿವಿ ಯ ಜಗದೀಶ್ ಮಣಿಯಾಣಿ ಇವರುಗಳು ಈ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ. ಮೇಲೆ ಹೆಸರಿಸಿದ ಮೊದಲನೆಯವ ಇಂಟರ್ ನೆಟ್ ಮತ್ತು ಬಲ ಪಂಥೀಯ ರಾಷ್ಟ್ರ ಮಟ್ಟದ ಪತ್ರಿಕೆಗಳಿಂದ ಸುದ್ದಿಗಳನ್ನು ಕದ್ದು ಹಿಂದೆ ವಿಕದಲ್ಲಿ ಈಗ ಕಪ್ರದಲ್ಲಿ ನಕಲು ಮಾಡಿದರೆ, ಎರಡನೇಯವ ರಾಜಕರಣಿಗಳ ನಮೆಯ ಕದ ತಟ್ಟಿ ತನ್ನ ಬೇಳೆ ಬೆಯಿಸುವವ,ಇಂಥವರಿಗೂ ಕನ್ನಡ ರಾಜ್ಯದ ಗೌರವ.ಇದು 2011 ರ ಮಹಾ ದುರಂತವಲ್ಲದೇ ಮತ್ತೇನು? ಸರ್ಕಾರ ಹೇಳಿತ್ತು 50 ವರ್ಷ ದಾಟಿದವರಿಗೇ ಮಾತ್ರ ಈ ಬಾರಿ ಇವರ ವಯಸ್ಸು ಎಷ್ಟೆಂಬೂದು ಬಹಿರಂಗ ವಾಗಬೇಕಿದೆ.ಈ ಟಿವಿ ಜಗದೀಶ ಮನೆಹಾಳ ಕ್ಷಮಿಸಿ ಮನಿಯಾಣಿ ಗಡಿ ನಾಡು ಕಾಸರಗೋಡಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಹೆಸರಿನಲ್ಲಿ ಪ್ರಶಸ್ತಿಗಿಟ್ಟಿಸಿದ್ದಾರೆ. ಇವರು ಅಲ್ಲಿ ಮಾಡಿದ ಕನ್ನಡದ ಸೇವೆ ಯಾವುದು,ಅಥವಾ ಇತರ ಪತ್ರಿಕೆಗಳಲ್ಲಿ ಅವ ಮಾಡಿದ ಸಾಧನೆ ಏನೂ ಯಾರತ್ರನೂ ಸ್ವತ ಮನೆಹಾಳನಿಗೂ ಉತ್ತರ ಗೊತ್ತಿಲ್ಲ.ಬಹುಶ ರಾಜ್ಯತ ಪತ್ರಕರ್ತರಿಗೆ ಈ ಮನೆಹಾಳ ಯಾರೆಂದೇ ಗೊತ್ತಿರಕ್ಕಿಲ್ಲ.ಇವ ಹೋದಲ್ಲಿ ಪತ್ರಿಕೆಗಳು ಬಾಗಿಲು ಮುಚ್ಚಿದೇ ದೊಡ್ಟ ಸಾಧನೆ,ಹೊಸ ಸಂಜೆ, ಜನವಾಹಿನಿ,ಜನಾಂತರಂಗ ಪತ್ರಿಕೆಗಳು ಈ ಧೂರ್ತ ಹೋದ ಮೇಲೆ ಶಾಶ್ವತವಾಗಿ ಕದ ಮುಚ್ಚಿವೆ. ಈತ ಪ್ರಶಸ್ತಿ ಗಿಟ್ಟಿಸಿದ್ದ ಬಗೆಯೂ ಇದೀಗ ಬಹಿರಂಗಗೊಂಡಿದೆ. ಪ್ರಭಾವಿ ಸಚಿವೆ ಶೋಭಾಳ ಸೆರಗನ್ನು ಹಿಡಿದು ಪ್ರಶಸ್ತಿ ಗಟ್ಟಿಸಿದ್ದು ಈಗ ಜಗಜ್ಜಾಹಿರಾಗಿದೆ. ಯಾವಗಲೂ ಈತನಿಗೆ ತನ್ನ ಹೆಂಡತಿಗಿಂತಲೂ ಈಕೆಯದ್ದೇ ಧ್ಯಾನ.ಹೈದ್ರಾಬಾದಿನಲ್ಲೂ ಅವಳ ಬಗ್ಗೆಯೇ ಕನವರಿಸಿಕೊಂಡಿರುತ್ತಾನೆ ಎಂದರೆ ಎನೂ ಸ್ವಾಮೀ.. ಅವನ ಈ ಟಿವಿ ಕಚೇರಿಯ ಸಹವರ್ತಿಗಳು ಇವನ ವರ್ತನೆಯಿಂದ ಬೇಸತ್ತಿದ್ದಾರಂತೆ.ಕರಾವಳೀಯ ಮತ್ತೊಬ್ಬ ಸಚಿವ ಪಲೇಮಾರಿಗೆ 25 ಲಕ್ಷದ ಪಂಗನಾಮ ಇಟ್ಟಿದ್ದಾನೆ ಈ ಮನೆಹಾಳ.ಇಂಥವರಿಂದ ಈ ಟಿವಿಯಂತ ಶುದ್ದ ಹಸ್ತದ ಸಂಸ್ಥೆ ಅದೇನು ನಿರೀಕ್ಷೆ ಇಟ್ಟಿಕೊಂಡಿದ್ದಾರೊ ಆ ಬ್ರಹ್ಮನೇ ಬಲ್ಲ, ಇಂಥ ಕೊಳಕುಮಂಡಳಗಳಿಂದ ಮಾದ್ಯಮ ರಂಗ ಅದೇನನ್ನು ನಿರೀಕ್ಷೆ ಮಾಡಬಹುದು,ಉತ್ತರ ನಿಮಗೆ ಬಿಟ್ಟಿದ್ದು..

Sunday, October 16, 2011

ಸಮಯ ಟಿವಿಗೆ ಲಕ್ಷ್ಮಿಯರೆಲ್ಲ ಪತಿಗಳ ಪಾಲಿನ ವಿನಾಶಿಗಳು..

24x7 ಚಾನೆಲುಗಳನ್ನು ಅದರಲ್ಲೂ ಕನ್ನಡ ಸುದ್ದಿ ಚಾನೆಲ್ ಗಳನ್ನು ವೀಕ್ಷಣೆ ಮಾಡುವುದು ಎಂದರೆ ವಾಕರಿಕೆ. ನಿಮಗೂ ಇದರ ಅನುಭವವಾಗಿರ ಬಹುದು.ಎಂಥ ಅದೇಂಥ ಸಂಬಂಧಗಳನ್ನು ಮನಸ್ಸಿನಲ್ಲೇ ಕಲ್ಪಿಸಿ ಅದಕ್ಕೊಂದು ರೂಪ ಕೊಡುತ್ತಾರೋ ಅ ಸೃಷ್ಟಿ ಕರ್ತ ಬೃಹ್ಮನೂ ಸೋತಾಂಗೆ.. ಚಾನಲ್‌ಗಳಿಗೂ, ಜ್ಯೋತಿಷಿಗಳಿಗೂ ಯಾವ ಜನ್ಮಜನ್ಮಾಂತರದ ಸಂಬಂಧವೋ ಗೊತ್ತಿಲ್ಲ. ಮೊನ್ನೆಮೊನ್ನೆ ತಾನೇ ಟಿವಿ ೯ ನವರು ದರ್ಶನ್ ಮತ್ತು ಆತನ ಹೆಂಡತಿಯ ಜ್ಯೋತಿಷ್ಯವನ್ನು ಹಿಡಿದುಕೊಂಡು ಯಾರೋ ತಲೆಮಾಸಿದ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತಿದ್ದರು. ಅವನ್ಯಾರೋ ಮುಠ್ಠಾಳ ಕಂಠಭರ್ತಿ ಕುಡಿದು ಹೆಂಡತಿಯನ್ನು ಹೊಡೆದರೆ ಅದಕ್ಕೆ ಜ್ಯೋತಿಷ್ಯ ಏನು ಮಾಡುತ್ತೋ ಭಗವಂತನೇ ಬಲ್ಲ.ಸಮಯ ಟಿವಿಯಲ್ಲಿ ಮತ್ತೊಂದು ಪ್ರಹಸನ. ಸಾಯಿಬಾಬಾ ಸತ್ತ ಕೆಲ ದಿನಗಳಲ್ಲೇ ಬಾಬಾರ ಆತ್ಮವನ್ನು ಸಮಯ ಟಿವಿಯ ಸ್ಟುಡಿಯೋಗೆ ಕರೆಸಿ ಮಾತನಾಡಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದನ್ನು ನೀವು ಬಲ್ಲಿರಿ. ಈಗ ವಿಚಿತ್ರವಾದ ಇನ್ನೊಂದು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಅದರ ಕಥೆಯೂ ಮಜಬೂತಾಗಿದೆ.
ಲಕ್ಷ್ಮಿಪತಿಯರಿಗೆ ಕಂಟಕ ಎನ್ನುವುದು ಕಾರ್ಯಕ್ರಮದ ಥೀಮು. ಕಾರ್ಯಕ್ರಮ ನಡೆಸಿದವರ ಪ್ರಕಾರ ಯಾರ ಹೆಸರು ಲಕ್ಷ್ಮಿ ಅಂತ ಇದೆಯೋ ಅವರ ಪತಿಯರಿಗೆಲ್ಲ ಕಂಟಕವಂತೆ. ಇದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು ಜನಾರ್ದನ ರೆಡ್ಡಿ, ವೀರಪ್ಪನ್, ಗ್ಯಾರಹಳ್ಳಿ ತಮ್ಮಯ್ಯ. ಸ್ಟುಡಿಯೋದಲ್ಲಿದ್ದ ಜ್ಯೋತಿಷಿಗಳಿಬ್ಬರು ಲಕ್ಷ್ಮಿ ಅನ್ನೋ ಹೆಸರೇ ಸರಿಯಲ್ಲ ಅನ್ನೋ ಹಂಗೆ ಮಾತಾಡಿದರು. ಒಬ್ಬನಂತೂ ಸರಸ್ವತಿ ಅಂತನೂ ಹೆಸರು ಇಟ್ಟುಕೊಳ್ಳಬಾರದು ಎಂದು ಆದೇಶ ಕೊಟ್ಟರು.ಜನಾರ್ದನ ರೆಡ್ಡಿಯ ಪತ್ನಿಯ ಹೆಸರು ಅರುಣಾ ಲಕ್ಷ್ಮಿ. ಹೀಗಾಗಿ ರೆಡ್ಡಿಗೆ ಕಂಟಕವಂತೆ. ನಾಡಿನ ಭೂಮಿಯನ್ನು ಅಗೆದು ದೋಚಿ, ಮಾಡಬಾರದ್ದನ್ನೆಲ್ಲ ಮಾಡಿ ರೆಡ್ಡಿ ಜೈಲುಪಾಲಾದರೆ ಅದಕ್ಕೆ ಅರುಣಾ ಲಕ್ಷ್ಮಿ ಏನು ಮಾಡಿಯಾಳು? ಯಾರಾದರೂ ಕಾಮನ್‌ಸೆನ್ಸ್ ಇರುವವರು ಹೇಳುವ ಮಾತೇ ಇದು? ಇದೀಗ ಸೂಪರ್ ಸಿ ಎಂ ಯಡ್ಡಿ ಜೂಲು ಪಾಲಗಿದ್ದಾರೆ ಸ್ವಾಮೀ ? ಇದಕ್ಕೂ ಏನಾದರೂ ಸಂಬಂಧ ಉಂಟೆ ?
ಇನ್ನು ವೀರಪ್ಪನ್‌ಗೂ ಮುತ್ತುಲಕ್ಷ್ಮಿಯ ಹೆಸರಿಗೂ ಏನು ಸಂಬಂಧ? ಮುತ್ತುಲಕ್ಷ್ಮಿಯನ್ನು ಮದುವೆಯಾಗುವುದಕ್ಕೂ ಮುನ್ನವೇ ವೀರಪ್ಪನ್ ಕಾಡುಗಳ್ಳನಾಗಿದ್ದ, ಪೊಲೀಸು, ಅರಣ್ಯ ಅಧಿಕಾರಿಗಳನ್ನು ಕೊಂದಿದ್ದ. ಅವನ ಪಾಪಕ್ಕೆ ಅವನು ಪೊಲೀಸರ ಗುಂಡಿಗೆ ಸಿಕ್ಕು ಸತ್ತ. ಇದರಲ್ಲಿ ಮುತ್ತುಲಕ್ಷ್ಮಿಯ ಪಾತ್ರವೇನು ಬಂತು? ಮುತ್ತುಲಕ್ಷ್ಮಿಯಲ್ಲದೆ ಬೇರೆ ಇನ್ಯಾರೋ ಆಶಾ, ರೇಖಾ, ವಾಣಿಯನ್ನು ಆತ ಮದುವೆಯಾಗಿದ್ದರೆ ಪೊಲೀಸರು ಮಾಫಿ ಮಾಡುತ್ತಿದ್ದರಾ?
ಮೂರನೇ ಉದಾಹರಣೆ ಗ್ಯಾರಹಳ್ಳಿ ತಮ್ಮಯ್ಯನದು. ಆತನ ಹೆಂಡತಿಯ ಹೆಸರು ವರಮಹಾಲಕ್ಷ್ಮಿ. ಗ್ಯಾರಹಳ್ಳಿ ತಮ್ಮಯ್ಯ ಹಿಂದೆ ಮತ್ತೊಬ್ಬ ರೌಡಿ ಹಾ.ರಾ.ನಾಗರಾಜನನ್ನು ಕೊಂದುಹಾಕಿದ್ದ. ನಾಗರಾಜನ ಮಕ್ಕಳು ದ್ವೇಷ ಇಟ್ಟುಕೊಂಡು ತಮ್ಮಯ್ಯನನ್ನು ಮುಗಿಸಿದರು. ಇವರಿಬ್ಬರ ದ್ವೇಷಕ್ಕೆ ವರಮಹಾಲಕ್ಷ್ಮಿಯ ಹೆಸರು ಏಕೆ ಹೊಣೆ ಹೊರಬೇಕು? ನಾಗರಾಜನೂ ಸತ್ತನಲ್ಲ, ಆತನ ಹೆಂಡತಿಯ ಹೆಸರು ಲಕ್ಷ್ಮಿ ಅಲ್ಲವಲ್ಲ? ಅವನೇಕೆ ಸತ್ತ?
ಜೈಲಿನಲ್ಲಿ ಮುದ್ದೆ ಮುರಿದುಕೊಂಡು ಬಿದ್ದಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಟ್ಟಾ ಮತ್ತವರ ಮಗ ಗ್ರಾಂಗಟ್ಟಲೆ ಅನ್ನ ತಿನ್ನುತ್ತಿದ್ದಾರೆ. ರಾಜಾ, ಕನ್ನಿಮೋಳಿ, ಅಮರಸಿಂಗ್, ಸುಧೀಂದ್ರ ಕುಲಕರ್ಣಿ, ಸತ್ಯಂ ರಾಜು ಇತ್ಯಾದಿಗಳು ಜೈಲು ಸೇರಿವೆ. ಅಕ್ಟೋಬರ್ ಮೂರರ ನಂತರ ಇನ್ನೂ ಸಾಕಷ್ಟು ಮಂದಿ ವಿವಿಐಪಿಗಳು ಜೈಲು ಪಾಲಾಗುವ ಸಾಧ್ಯತೆಗಳಿವೆ. ಇವರೆಲ್ಲರ ಪತ್ನಿಯರ ಹೆಸರೂ ಲಕ್ಷ್ಮಿ ಎಂತಲೇ ಇವೆಯೇ?
ಅದೆಲ್ಲ ಹಾಗಿರಲಿ, ಅನಿಷ್ಟಕ್ಕೆಲ್ಲ ಹೆಣ್ಣುಮಕ್ಕಳನ್ನೇ ದೂರುವುದು ಯಾಕೆ? ಈಗಲೂ ಹೆಣ್ಣುಮಕ್ಕಳ ಕಾಲ್ಗುಣ, ಕೈಗುಣ ಇತ್ಯಾದಿ ಕಪೋಲಕಲ್ಪಿತ ನಂಬಿಕೆಗಳನ್ನೆಲ್ಲ ಹೇರಿ ಅವರನ್ನು ಶೋಷಿಸಲಾಗುತ್ತಿದೆ. ಈಗ ಅವರ ಹೆಸರೂ ಅವರ ಪಾಲಿನ ಶತ್ರುವಾದರೆ ಹೇಗೆ?
ಲಕ್ಷ್ಮಿ ಎನ್ನುವುದು ಅತ್ಯಂತ ಪಾಪ್ಯುಲರ್ ಆದ ಹೆಸರು. ಈ ಹೆಸರಿರುವ ಲಕ್ಷಾಂತರ ಹೆಣ್ಣುಮಕ್ಕಳು ನಾಡಿನಲ್ಲಿದ್ದಾರೆ. ಇವರೆಲ್ಲರಿಗೂ ಸಮಯ ಟಿವಿ ಕೊಡುವ ಸಂದೇಶವಾದರೂ ಏನು? ನಿಮ್ಮ ಹೆಸರು ಬದಲಾಯಿಸಿಕೊಳ್ಳಿ ಅಂತಾನಾ? ಈ ಹೆಣ್ಣುಮಕ್ಕಳ ಗಂಡಂದಿರಿಗೆ ಕೊಡುವ ಸಂದೇಶ ಏನು? ಡೈವೋರ್ಸ್ ಮಾಡಿಬಿಡಿ ಎಂದೇ?
ಕೇವಲ ಅಗ್ಗದ ಜನಪ್ರಿಯತೆಗಾಗಿ ಸಮಯ ಟಿವಿಯವರು ಇಂಥ ಹರಕು-ಮುರುಕು ದ್ದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವುದಾದರೆ ಪ್ರಜ್ಞಾವಂತ ವೀಕ್ಷಕರಿಗೆ ಅದು ಕನಿಷ್ಠ ಕನಿಕರವನ್ನೂ ಮೂಡಿಸುವುದಿಲ್ಲ, ಬದಲಾಗಿ ಅಸಹ್ಯ ಮೂಡಿಸುತ್ತದೆ.
ಎಂದೂ ಸತ್ಯವನ್ನೇ ಹೇಳದ ಜಿ.ಎನ್ ನ ಹೆಂಡತಿ ಹೆಸರು ಸತ್ಯ ಇದರ ಬಗ್ಗೆಯೂ ಸಮಯ ಟೀವಿಯವರು ಒಬ್ಬ ಜ್ಯೋತಿಷಿಯನ್ನು ಸ್ಟುಡಿಯೋದಲ್ಲಿ ಕೂರುಸುವುದು ಕ್ಷೇಮವಲ್ಲವೇ? ಕೇವಲ ಟಿ ಆರ್ ಪಿ ಗಾಗಿ ಇತರರನ್ನು ಬಲಿ ಕೊಡುವ ಇವರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಹಾಗಾಗದಿರಲಿ ಎಂಬುದು ನಮ್ಮ ಪ್ರಾಮಾಣಿಕ ಆಶಯ.

Monday, August 22, 2011

ಅಕ್ರಮ ಗಣಿ ವರದಿಯ ಪಟ್ಟಿಯಲ್ಲಿ ಈ ಟಿವಿ ಸುದ್ದಿ ಮುಖ್ಯಸ್ಥ

ದೇಶಾದ್ಯಂತ ಕೋಲಹಲ ಎಬ್ಬಿಸಿರುವ ಕರ್ನಾಟಕದ ಗಣಿ ಮಾಫಿಯದಲ್ಲಿ ಇದೀಗ ಮಾದ್ಯಮದ ಮಂದಿಗಳು ಬೆತ್ತಲಾಗುತ್ತಿದ್ದಾರೆ.ಹಿಂದಿನ ಲೋಕಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಯಾರೆಲ್ಲ ಮಾದ್ಯಮದ ಮಂದಿಗಳು ಗಣಿ ಲಂಚ ಪಡೆದಿದ್ದಾರೆ ಮತ್ತು ಗಣಿ ಅಕ್ರಮಕ್ಕೆ ರಾಜಕರಣಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಇತ್ತಿಚೆಗೆ ಕೆಲವರ ಹೆಸರುಗಳನ್ನು ರಾಜ್ಯದ ಪ್ರಭಾವಿ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಿಸಲಾಗಿದೆ.ಇನ್ನು ಹಲವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಇವುಗಳಲ್ಲಿ ಸುವರ್ಣ ಚಾನೆಲ್ಲಿನ ಮಾಜಿ ಕ್ಯಾಪ್ಟನ್ ರಂಗ,ಈ ಟಿವಿ ಸುದ್ದಿ ವಿಭಾಗದ ಮುಖ್ಯಸ್ಥ ಜಗದೀಶ ಮಣಿಯಾನಿ ಕೂಡ ಹೆಸರು ಸೇರ್ಪಡೆಯಾಗಿದ್ದು ಹೆಚ್ಚಿನವರಿಗೆ ಗೊತ್ತಿಲ್ಲ.ಗಣಿ ಧೂಳನ್ನು ತಿಂದವರಲ್ಲಿ ಮಣಿಯಾನಿ ಕೂಡ ಒಬ್ಬ, ಮಣಿಯಾಣಿಯ ಗಣಿಗಾರಿಕೆಯ ಧಂದೆಯನ್ನು ಅವರದೇ ಭಾವ (ಹೆಂಡತಿ ತಮ್ಮ) ನೋಡಿಕೊಳ್ಳುತ್ತಿದ್ದ,ಕೋಟ್ಯಾಂತರ ರೂಪಾಯಿಗಳನ್ನು ಅವನು ತನ್ನ ಭಾವನ ಹೆಸರಿನಲ್ಲಿ ಧಂದೆ ಮಾಡಿ ಜೇಬಿಗೆ ಇಳಿಸಿದ್ದಾನೆ ಎಂದು ತಿಳಿದುಬಂದಿದೆ.ಕಾರವಾರದ ಬೆಲೆಕೇರಿಯ ಬಂದರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಇವರ ಅದಿರನ್ನು ಕಳೆದ ಬಾರಿ ಲೋಕಯುಕ್ತರು ವಶಪಡಿಸಿಕೊಂಡಾಗ ಕಂಗಾಲದ ಮಣಿಯಾಣಿ ರಾಜಕೀಯ ನೇತಾರರಿಂದ ಲೋಕಯುಕ್ತ ಪೋಲಿಸರ ಮೇಲೆ ಒತ್ತಡ ಹಾಕಿ ಅದಿರನ್ನು ಬಿಡಿಸಿಕೊಳ್ಳಲು ಹೆಣಗಾಡಿದ್ದಾನು ಎಂದು ತಿಳಿದು ಬಂದಿದೆ.ಇಂತಹ ಭಷ್ಟರು ಈಟಿವಿಯ ಸುದ್ದಿ ವಿಭಾಗದ ಮುಖ್ಯಸ್ಥರಾದರೆ ಜನತೆ ಇವರಿಂದ ಏನು ನಿರೀಕ್ಷಿಸ ಬಹುದು..? ಈ ಟಿವಿಯ ಉನ್ನತ ಹುದ್ದೆಯಲ್ಲಿರುವರು ಇದನ್ನು ಗಮನಿಸಿ ತನಿಖೆ ನಡೆಸಿದರೆ ಇಂತವರ ಜಾತಕ ಹೊರ ಬರಹುದು..

Tuesday, August 16, 2011

ಅಣ್ಣಾ ಬೆಂಬಲಕ್ಕೆ ಬಂದವರು ಮೈಕಿಗಾಗಿ ಕಿತ್ತಾಡಿದರು

ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಮರ ಸಾರಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಅಣ್ಣಾ ಹಜಾರೆಯನ್ನು ಬಂಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಗಳೂರಲ್ಲಿ ಅಣ್ಣಾ ಅವರಿಗೆ ಬೆಂಬಲ ಸೂಚಿಸಲು ಮುಂದಾದ ಎರಡು ಬಣಗಳು ಮೈಕಿಗಾಗಿ ಕಿತ್ತಾಡಿದ ಮಾಡಿದ ವಿಲಕ್ಷಣ ಘಟನೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದಿದೆ.ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು.ಸೋಜಿಗದ ವಿಷಯ ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳಲ್ಲೂ ತವಕ. ಆದರೆ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕೊಟ್ಟರೆ ಸಾಕು ಎನ್ನುವುದು ಒಂದು ಗುಂಪಿನ ವಾದ. ಆದರೆ ಮತ್ತೊಂದು ಗುಂಪು ಲೋಕಪಾಲ ಮಸೂದೆ ಬಗ್ಗೆ ಬೇರೆಯೇ ಸಂಗತಿಗಳಿವೆ, ಅವುಗಳನ್ನು ಬಹಿರಂಗಪಡಿಸಲು ಅವಕಾಶ ಕೊಡಬೇಕು ಎನ್ನುವ ಪಟ್ಟು.ಅಂತಿಮವಾಗಿ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಎರಡೂ ಬಣಗಳ ಮೈಕಿಗಾಗಿ ಗುದ್ದಾಡಲು ಮುಂದಾದುದದನ್ನು ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದರು. ಅಂತೂ ಅಣ್ಣಾ ಅವರಿಗೆ ಎರಡೂ ಗುಂಪುಗಳ ಬೆಂಬಲ ಸಿಕ್ಕಿತು.
ಬಲ್ಲ ಮೂಲಗಳ ಮಾಹಿತಿ ಆಧಾರದಲ್ಲಿ ಹೇಳುವುದಾದರೆ ಇಲ್ಲಿ ಸೇರಿದವರಲ್ಲಿ ಶೇಕಡ 50ರಷ್ಟು ಭ್ರಷ್ಟರು ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದರು,ಕೆಲವರು ಭೂಗಾತ ಪಾತಕಿಗಳು ಮತ್ತು ವಿವಿಧ ಪೋಲಿಸ್ ಠಾಣೆಗಳಲ್ಲಿ ಪ್ರಕರಣಗಳಿರುವವರು ಇದ್ದರು.ಇವರು ಭ್ರಷ್ಟಾಚಾರದ ಬಗ್ಗೆಮಾತನಾಡುವುದು ಬಿಡಿ ಬೆಂಬಲ ನೀಡಲು ನಾಲಯಕ್ಕು..ನೇರ ನಡೆ ನುಡಿಯ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಮಾತ್ರ ಪ್ರತಿಭಟನೆಯಲ್ಲಿ ತಲೆಗೆ ಗಾಂಧಿ ಟೋಪಿ ಇಟ್ಟ( ಇತರರಿಗೆ ಟೋಪಿ ಇಡುವ) ಮಂದಿಯನ್ನು ಚೆನ್ನಾಗಿ ತರಾಟೆ ತೆಗೆದುಕೊಂಡರು ಎಂದು ತಿಳಿದು ಬಂದಿದೆ.ಗಾಂಧಿ ಟೋಪಿ ಇಟ್ಟು ಗಾಂಧಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಫೋಸು ಕೊಟ್ಟರೆ ಭ್ರಷ್ಟಾಚಾರ ಕಡಿಮೆ ಆಗಲ್ಲ ಮತ್ತು ಈ ಭ್ರಷ್ಟರಿಗೆ ಇಂತಹ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ನೈತಿಕತೆ ಕೂಡ ಇಲ್ಲ ಎಂದು ಚೆನ್ನಾಗಿ ತದಕಿದ್ದಾರಂತೆ.ಇಷ್ಟು ಸಾಕಾ ಅಲ್ಲಾ ಇನ್ನೂ ಬೇಕಾ ಈ ಭ್ರಷ್ಟರಿಗೆ...

ಸಮಯ 24x7 : ಜಿ.ಎನ್. ಮೋಹನ್

ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಸಮಯ ಚಾನೆಲಿನ ಸಂಪಾದಕರಾಗಿ ಅಧಿಕಾರ ವಹಿಸಿದ್ದಾರೆ.ನ್ಯೂಸ್ ಚಾನಲ್ ಹೆಡ್ ಆಗಿ ಕೆಲಸ ಮಾಡುವುದು ಮೀಡಿಯಾ ಮಿರ್ಚಿ ಬರೆದಷ್ಟು ಸುಲಭವಲ್ಲ. ಅದು ಮೋಹನ್‌ರಿಗೆ ಚೆನ್ನಾಗಿಯೇ ಗೊತ್ತಿದೆ.ಜಿ.ಎನ್.ಮೋಹನ್ ಹಿಂದೆ ಪ್ರಜಾವಾಣಿಯಲ್ಲಿದ್ದವರು. ನಂತರ ಈಟಿವಿಗೆ ಬಂದು ಅದರ ನ್ಯೂಸ್ ಮುಖ್ಯಸ್ಥರಾಗಿ ಕೆಲಸ ಮಾಡಿದವರು ಮಾತ್ರವಲ್ಲ ಚಾನೆಲ್ ಗೆ ಒಂದು ಒಳ್ಳೆ ಹೆಸರು ತಂದು ಕೊಟ್ರು. ಬೆಂಗಳೂರು, ಮಂಗಳೂರು, ಗುಲ್ಬರ್ಗ, ಹೈದರಾಬಾದ್ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.
ಈ ಟಿವಿ ಬಿಟ್ಟ ನಂತರ ಅವರು ತಮ್ಮದೇ ಆದ ಮೇ ಫ್ಲವರ್ ಮೀಡಿಯಾ ಹೌಸ್ ಕಟ್ಟಿಕೊಂಡರು.ಪರ್ಯಾಯ ಮಾಧ್ಯಮದ ಕುರಿತು ಜಿ.ಎನ್.ಮೋಹನ್ ಹುಡುಕಾಟ ನಡೆಸುತ್ತಿದ್ದರು. ತನ್ನ ಕನಸಿನ ಕೂಸು ಮೇ ಫ್ಲವರ್ ಒಂದು ಸಂಸ್ಥೆಯನ್ನಾಗಿ ಬೆಳೆಸಲು ಯತ್ನಿಸಿದರು. ಅದು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆದರೆ ಪ್ರಯತ್ನಗಳಂತೂ ನಿಲ್ಲಲಿಲ್ಲ. ಮಾಧ್ಯಮ ಕೋರ್ಸುಗಳನ್ನು ಆರಂಭಿಸುವ ಪ್ರಯತ್ನ ನಡೆಸಿದರು. ಅವಧಿ ಎಂಬ ಸೊಗಸಾದ ಬ್ಲಾಗ್ ರೂಪಿಸಿದರು. ನಂತರ ಅದನ್ನು ವೆಬ್ ಸೈಟ್ ಮಾಡಿದರು. ಕನ್ನಡ ಪತ್ರಕರ್ತರ ಪೈಕಿ ಅತ್ಯಂತ ಹೆಚ್ಚು ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದವರು ಮೋಹನ್. ಹೀಗಾಗಿಯೇ ವ್ಯಾವಹಾರಿಕ ಪ್ರಯತ್ನಗಳನ್ನು ಮಾಡಿದಾಗಲೆಲ್ಲ ಟೀಕೆಗೆ ಗುರಿಯಾದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಜನರ ಜತೆಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ಮೋಹನ್ ಮೀಡಿಯಾ ಗ್ರಾಮರ್ ಚೆನ್ನಾಗಿ ಅರಿತವರು. ಈ ಟಿವಿಯಲ್ಲಿ ನಡೆಸಿದ ಪ್ರಯೋಗಗಳು ಇದಕ್ಕೆ ಸಾಕ್ಷಿ.
ನ್ಯೂಸ್ ಚಾನಲ್‌ಗಳು ಒಂದರ ಹಿಂದೊಂದರಂತೆ ಬರುವುದಕ್ಕೂ ಮುನ್ನ ಇದ್ದ ಮನರಂಜನಾ ಚಾನಲ್‌ಗಳಲ್ಲಿ ಅತಿಹೆಚ್ಚು ಪಾಪ್ಯುಲರ್ ಆಗಿದ್ದು ಈ ಟಿವಿ ನ್ಯೂಸ್. ಸುದ್ದಿಗೂ ಮನರಂಜನೆಯ ಟಚ್ ನೀಡಿದ ಮೊದಲಿಗರು ಮೋಹನ್. (ಅದೆಷ್ಟು ಸರಿ ಎಂಬ ಚರ್ಚೆ ಈಗಲೂ ಇದೆ.) ಪೂರ್ಣಚಂದ್ರ ತೇಜಸ್ವಿ ಸಾವಿನ ನಂತರ ಈಟಿವಿ ಸುದ್ದಿಯಲ್ಲಿ ಪ್ರಸಾರವಾದ ತೇಜಸ್ವಿ ನೆನಪು ಮಾಲಿಕೆ ಸದಾ ಕಾಲಕ್ಕೂ ಸ್ಮರಣೀಯ. ರಾಜಕೀಯ ವಿದ್ಯಮಾನಗಳಿಗೆ ಸಿನಿಮಾ ಹಾಡುಗಳ ಹಿನ್ನೆಲೆ ನೀಡಿ ಯಶಸ್ವಿಯಾಗಿದ್ದೂ ಜಿ.ಎನ್.ಮೋಹನ್ ಪ್ರಯೋಗವೇ.
ಆದರೆ ಈಗ ಕಾಲ ತುಂಬಾ ಮುಂದಕ್ಕೆ ಹೋಗಿದೆ. ಸುದ್ದಿ ಚಾನಲ್‌ಗಳ ಪೈಪೋಟಿ ವಿಪರೀತಕ್ಕೆ ಏರಿದೆ. ಜ್ಯೋತಿಷ್ಯ, ಕ್ರೈಂ, ಪುನರ್ಜನ್ಮ, ಸೆಕ್ಸ್ ಇತ್ಯಾದಿ ಮಸಾಲೆಗಳಿಲ್ಲದೆ ಸುದ್ದಿ ಚಾನಲ್ ನಡೆಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಚಾನಲ್‌ಗಳಿಗೆ ಮುಖ್ಯ, ಏನನ್ನು ಕೊಡಬೇಕು ಎಂಬುದಲ್ಲ. ಹೀಗಿರುವಾಗ ಮೋಹನ್‌ರ ಸಾಂಸ್ಕೃತಿಕ ಅಭಿರುಚಿಗಳು ಅವರನ್ನು ಕಾಪಾಡುತ್ತವಾ ಎಂಬುದು ಮಹತ್ವದ ಪ್ರಶ್ನೆ. ಆದರೆ ಮೋಹನ್ ಇನ್ನೂ ಹುಡುಗು ಮನಸ್ಸಿನವರು, ಹೀಗಾಗಿ ಹೊಸಹೊಸ ಪ್ರಯೋಗಗಳನ್ನು ಮಾಡಬಲ್ಲರು ಎಂಬ ನಂಬಿಕೆಯೂ ಇದೆ.ಟಿವಿ9 ಎಲ್ಲ ನ್ಯೂಸ್ ಚಾನಲ್‌ಗಳಿಗಿಂತ ಮುಂದಿದೆ. ಅದನ್ನು ಹಿಮ್ಮೆಟ್ಟುವ ಧೀರರು ಸದ್ಯಕ್ಕೆ ಕಾಣುತ್ತಿಲ್ಲ. ಕಸ ಕೊಟ್ಟರೂ ರಸ ಮಾಡಿಕೊಳ್ಳುವ ಕಲೆ ಆ ಚಾನೆಲ್‌ನ ಸಿಬ್ಬಂದಿಗಿದೆ. ಯಾರು ಬಿಟ್ಟು ಹೋದರೂ ಕ್ಯಾರೇ ಅನ್ನದೇ, ಹೊಸ ಹುಡುಗ-ಹುಡುಗಿಯರನ್ನು ಸಿದ್ಧಪಡಿಸುವ ಛಾತಿ ಅವರಿಗಿದೆ. ಇನ್ನು ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಸುವರ್ಣ ನ್ಯೂಸ್ ನಿರ್ದಿಷ್ಟ ಪೊಲಿಟಿಕಲ್ ಅಜೆಂಡಾಗಳೊಂದಿಗೆ ಮುನ್ನುಗ್ಗುತ್ತಿದೆ. ಸುವರ್ಣ ನ್ಯೂಸ್‌ಗೆ ಫೈಟಿಂಗ್ ಮಾಡುತ್ತಿರುವುದು ಜನಶ್ರೀ. ಈ ಚಾನಲ್‌ನ ವಿಶೇಷವೆಂದರೆ ಕಸ್ತೂರಿ ಟಿವಿಯ ಹಾಗೆ ಇದು ಮಾಲೀಕರ ತುತ್ತೂರಿಯಾಗಲಿಲ್ಲ. ಅದರ ಪರಿಣಾಮಗಳು ಈಗ ಕಾಣಿಸುತ್ತಿವೆ.ಇಂಥ ಸನ್ನಿವೇಶದಲ್ಲಿ ಜಿ.ಎನ್.ಮೋಹನ್ ಸಮಯದಲ್ಲಿ ಏನೇನು ಮಾಡಬಹುದು? ಪಾತಾಳಕ್ಕೆ ಇಳಿದಿರುವ ಟಿಆರ್‌ಪಿ ಎತ್ತಲು ಅವರಿಂದ ಸಾಧ್ಯವೇ? 24x7ನ್ಯೂಸ್ ಚಾನಲ್‌ನ ಗ್ರಾಮರುಗಳಿಗೆ ಅವರು ಒಗ್ಗಿಕೊಳ್ಳಬಹುದೇ? ಕಾದು ನೊಡೋಣ ಅಲ್ಲವೇ..?